ಲೀಸಾ ಇಂಡಿಯಾದ ಡಿಸೆಂಬರ್ 2022ರ ಸಂಚಿಕೆಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಈ ಸಂಚಿಕೆಯು ಮುಖ್ಯವಾಗಿ ಸಂಪನ್ಮೂಲ ನಿರ್ವಹಣೆ, ಉತ್ತಮ ಕೃಷಿ ಆದಾಯ, ಸುಸ್ಥಿರತೆಯಂತಹ ಸಮಗ್ರ ಕೃಷಿ ಪದ್ಧತಿಯ ಲಾಭಗಳನ್ನು ಕುರಿತದ್ದಾಗಿದೆ.
ಸಮಗ್ರ ಕೃಷಿ ಪದ್ಧತಿಗಳು ಕೃಷಿ ವ್ಯವಸ್ಥೆಯ ಹಲವು ಭಾಗಗಳನ್ನು ಒಳಗೊಂಡಿರುತ್ತದೆ. ಈ ಸಂಚಿಕೆಯಲ್ಲಿನ ತಮಿಳುನಾಡಿನ ತಮಿಳರಸಿ, ಮೇಘಾಲಯದ ಲಿಂಗ್ರಾ ಇಬ್ಬರೂ ಸಮಗ್ರ ಕೃಷಿ ಪದ್ಧತಿಗೆ ಸಂಬಂಧಿಸಿದಂತೆ ಸ್ಪೂರ್ತಿದಾಯಕ ಉದಾಹರಣೆಗಳಾಗಿದ್ದಾರೆ. ಇವರ ಕತೆಗಳು ಸಮಗ್ರಕೃಷಿ ಮಾದರಿಗಳು ಮರುಬಳಕೆ, ಸಂಪನ್ಮೂಲಗಳ ಮರುಬಳಕೆ, ಕೃಷಿ ವೆಚ್ಚ ತಗ್ಗಿಸುವಿಕೆ, ತೋಟದಲ್ಲಿ ವೈವಿಧ್ಯತೆ, ಇವೆಲ್ಲವೂ ಸುಸ್ಥಿರ ಬದುಕಿಗೆ ಕಾರಣವಾಗುತ್ತವೆ ಎನ್ನುವುದನ್ನು ತೋರುತ್ತದೆ. ಸಾಂಪ್ರದಾಯಿಕ ವ್ಯವಸ್ಥೆಗಳಾದ ಪೂರಕ ಬೆಳೆ, ಜಾನುವಾರು ಸಾಕಣೆಗಳು ರೈತರು ಹಾಗೂ ಪಶುಸಂಗೋಪಕರಿಗೆ ಲಾಭದಾಯಕವಾದದ್ದು. ಇದನ್ನು ಗುಜರಾತ್ ಹಾಗೂ ಆಂಧ್ರ ಪ್ರದೇಶದ ಸಮುದಾಯಗಳ ಅನುಭವದ ಮೂಲಕ ತಿಳಿಯಬಹುದಾಗಿದೆ.
ಈ ಸಂಚಿಕೆಯಲ್ಲಿ ಸಮದಾಯ ವಿಸ್ತರಣಾ ವಿಧಾನಗಳ ಕುರಿತಂತೆ ಐಸಿಎಆರ್ನ ಅನುಭವಗಳನ್ನು ನೀಡಲಾಗಿದೆ. ಇದು ತೆಂಗಿಗೆ ಕಾಡುವ ಕಪ್ಪುದುಂಬಿ ಕೀಟಬಾಧೆಯನ್ನು ಎದುರಿಸಲು ಜೈವಿಕ ನಿರ್ವಹಣಾ ವಿಧಾನಗಳು, ಬಿಹಾರದ ಋತುಮಾನದ ಹಣ್ಣುಗಳು, ಲಿಚಿ ಹಣ್ಣಿನ ಮೌಲ್ಯವರ್ಧನೆಯನ್ನು ಒಳಗೊಂಡಿದೆ.
ಈ ಸಂಚಿಕೆ ನಿಮಗೆ ಇಷ್ಟವಾಗುತ್ತದೆಯೆಂದು ಭಾವಿಸಿದ್ದೇವೆ. ನಿಮ್ಮ ಪ್ರತಿಕ್ರಿಯೆಗಳಿಗಾಗಿ ಕಾದಿರುತ್ತೇವೆ.
ವಿಷಯಸೂಚಿ 1.ಭಾರತದಲ್ಲಿನ ಸಾಂಪ್ರದಾಯಿಕ ಕೃಷಿ-ಪಶುಸಂಗೋಪನಾ ವ್ಯವಸ್ಥೆಗಳ ಅವಲೋಕನ
ರಿತುಜಾ ಮಿತ್ರ ಮತ್ತು ಸಾಹಿತ್
2.ತೆಂಗು ಕೀಟಗಳ ಜೈವಿಕ ನಿರ್ವಹಣೆಯ ಸಾಮೂಹಿಕ ಅಳವಡಿಕೆಯ ಸಾಮಾಜಿಕ ಪ್ರಕ್ರಿಯೆ
ಅನಿತಾಕುಮಾರಿ ಪಿ
3. ಲಿಚಿ ಸಂಸ್ಕರಣೆ ಭರವಸೆಯ ಮೌಲ್ಯವರ್ಧನೆ
ಅಲೆಮಾವತಿ ಪೊಂಗೆನರ್, ಎಸ್.ಕೆ.ಪುರ್ಬೆ, ವಿನೋದ್ ಕುಮಾರ್, ವಿಶಾಲ್ ನಾಥ್, ಎಸ್.ಡಿ.ಪಾಂಡೆ ಮತ್ತು ಅಭಯ್ ಕುಮಾರ್
ಮೌಸಿಯತ್ಖ್ನಮ್ ಕೆವಿಕೆ ಪೂರ್ವ ಖಾಸಿ ಹಿಲ್ಸ್, ಮೇಘಾಲಯ
ಜೆ ಕೃಷ್ಣನ್