ಸಮಗ್ರ ಕೃಷಿ ಪದ್ಧತಿ

ಮೌಸಿಯತ್ಖ್ನಮ್ ಕೆವಿಕೆ ಪೂರ್ವ ಖಾಸಿ ಹಿಲ್ಸ್, ಮೇಘಾಲಯ


ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಜಮೀನಿನಲ್ಲಿ ಸಮಗ್ರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಇದರಿಂದಾಗಿ ಅವರು ಹೆಚ್ಚು ಉತ್ಪಾದಿಸಲು ಮತ್ತು ಹೆಚ್ಚು ಗಳಿಸಲು ಸಹಾಯ ಮಾಡುತ್ತವೆ. ಲಿನ್ಗ್ರಾ ಅವರದು ಈಗ ಮಾದರಿ ಫಾರ್ಮ್ ಆಗಿದೆ. ಇದು ಕೆವಿಕೆ ಒದಗಿಸಿದ ಅಂತಹ ಬೆಂಬಲಕ್ಕೆ ಉದಾಹರಣೆಯಾಗಿದೆ.


ಶ್ರೀ ವಲ್ಲಮ್ ಕುಪರ್ ಲಿಂಗ್ರಾ ಪ್ರಗತಿಪರ ಮತ್ತು ನಾವಿನ್ಯತೆಯನ್ನು ಅಳವಡಿಸಿಕೊಂಡ ರೈತ. ಇವರು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಮಾವ್ಲೈ ಸಿ & ಆರ್‌ಡಿ ಬ್ಲಾಕ್‌ನ ಮೌಸಿಯಾತ್ಖ್ನಮ್ ಗ್ರಾಮದವರು. ಇವರು ಪದವೀಧರರಾಗಿದ್ದು ಶಿಕ್ಷಕ ವೃತ್ತಿಯಲ್ಲಿದ್ದಾರೆ. ಅವರು ಉತ್ತಮ ಕೃಷಿ ಪದ್ಧತಿಗಳತ್ತ ಗಮನಹರಿಸಲು ತಮ್ಮ ಸಮಯವನ್ನು ವಿನಿಯೋಗಿಸಿದ್ದಾರೆ. ಅವರ ಒಟ್ಟಾರೆ 4.94 ಎಕರೆಯಲ್ಲಿ 2.50 ಎಕರೆಯಷ್ಟನ್ನು ಸಮಗ್ರ ಕೃಷಿ ಫಾರಂ ಆಗಿ ಪರಿವರ್ತಿಸಿದ್ದಾರೆ.

ಕೃಷಿ ಉದ್ಯಮಿಯಾಗಿ, ಸಾಂಪ್ರದಾಯಿಕ ಕೃಷಿ ಪದ್ಧತಿಯು ಇಳುವರಿ ಮತ್ತು ಆದಾಯವನ್ನು ಕಡಿಮೆ ಮಾಡುತ್ತದೆ ಎಂದು ಶ್ರೀ ಲಿನ್‌ಗ್ರಾ ಭಾವಿಸಿದರು. ಇದು ಕಡಿಮೆ ಉತ್ಪಾದನೆ, ಒಳಸುರಿಯುವಿಕೆಗಳ ವೆಚ್ಚ ಹೆಚ್ಚು, ಜಮೀನನಲ್ಲಿರುವ ಸಂಪನ್ಮೂಲಗಳನ್ನು ಬಳಸುವುದಿಲ್ಲ ಇಲ್ಲವೇ ಕಡಿಮೆ ಬಳಕೆ. ಸಾಂಪ್ರದಾಯಿಕ ವಿಧಾನವು ಪರಿಸರಾತ್ಮಕ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಸೀಮಿತ ಬೆಳೆ ವೈವಿಧ್ಯತೆ ಹಾಗೂ ಮಣ್ಣು, ನೀರಿನ ಮಾಲಿನ್ಯಕ್ಕೂ ಕಾರಣವಾಗುತ್ತದೆ.

ಸುಸ್ಥಿರ ಕೃಷಿವಿಧಾನಗಳನ್ನು ಹುಡುಕಲು ಹೊರಟಾಗ ಸುಸ್ಥಿರ ಕೃಷಿಕರಾಗುವತ್ತ ಅವರ ಪ್ರಯಾಣ ಆರಂಭವಾಯಿತು. 2013 ರಲ್ಲಿಅವರು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕಕ್ಕೆ ಬಂದರು. ಸಮಗ್ರ ಕೃಷಿಯ ಮೂಲಕ ಸುಸ್ಥಿರ ಕೃಷಿಯ ಕುರಿತು ತಾಂತ್ರಿಕ ಮಾರ್ಗದರ್ಶನ ಪಡೆದರು. ಮೇಘಾಲಯದ ರಿ-ಭೋಯಿ ಜಿಲ್ಲೆಯ ಉಮಿಯಂ, ಉಮ್ರೋಯಿ ರಸ್ತೆ, ಉಮಿಯಂ, ಎನ್‌ಇಎಚ್ ಪ್ರದೇಶದ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ ಭೇಟಿ ನೀಡಿದರು. ಅಲ್ಲಿ ಅವರು ಸಮಗ್ರ ಕೃಷಿ ವ್ಯವಸ್ಥೆಯ ಪರಿಕಲ್ಪನೆ ಮತ್ತು ಆದಾಯದ ಅವಕಾಶಗಳನ್ನು ಪರಿಚಯಿಸಿದರು. ಕೆವಿಕೆ ಹಾಗೂ ಇತರ ಸಂಬಂಧಿತ ಇಲಾಖೆಗಳು ನಡೆಸಿದ ಹಲವಾರು ತರಬೇತಿ ಕಾರ್ಯಕ್ರಮಗಳು, ಸೆಮಿನಾರ್‌ಗಳು, ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಅವರು ತಾಂತ್ರಿಕ ಜ್ಞಾನವನ್ನು ಸಂಗ್ರಹಿಸಿದರು. ಅವರು 2015 ರಲ್ಲಿ ಒಟ್ಟು 2.50 ಎಕರೆಯಲ್ಲಿ ಕೋಳಿ ಮತ್ತು ಹಂದಿ ಸಾಕಾಣಿಕೆ ಘಟಕಗಳನ್ನು ಮುಖ್ಯ ಘಟಕಗಳಾಗಿ ಹೊಂದಿರುವ ಸಮಗ್ರ ಫಾರಂ ಅನ್ನು ಸ್ಥಾಪಿಸಿದರು. ಸಮಗ್ರ ಕೃಷಿಯ ಬಗ್ಗೆ ತಿಳಿವಳಿಕೆ ಹೊಂದಿದ್ದ ಶ್ರೀ ಲಿಂಗ್ರಾ ಅವರು ಹೆಚ್ಚುವರಿ ಘಟಕಗಳನ್ನು ಸೇರಿಸುವ ಮೂಲಕ ತಮ್ಮ ಫಾರಂ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದರು.

ಘಟಕಗಳ ವಿವರಗಳು

 ಪ್ರಸ್ತುತ ಸಮಗ್ರ ಕೃಷಿಯು ಈ ಕೆಳಗಿನ ಘಟಕಗಳನ್ನು 2.5 ಎಕರೆ ಭೂಮಿಯಲ್ಲಿ ವಿಂಗಡಿಸಲಾಗಿದೆ:

  1.  ತೋಟಗಾರಿಕೆ ಘಟಕ
  2.  ಪಶುಸಂಗೋಪನೆ ಮತ್ತು ಜಾನುವಾರು ಘಟಕ
  3. ಎರೆಹುಳುಗೊಬ್ಬರ ಘಟಕ

      I.ತೋಟಗಾರಿಕೆ ಘಟಕ

  1. ತೋಟಗಾರಿಕಾ ಘಟಕವು ತರಕಾರಿ ಬೆಳೆಗಳಾದ ಎಲೆಕೋಸು, ಹೂಕೋಸು, ಮೆಣಸಿನಕಾಯಿ, ಶುಂಠಿ, ಚೌ-ಚೌ, ಇತ್ಯಾದಿ, ಹಣ್ಣಿನ ಬೆಳೆಗಳಾದ ಪಪ್ಪಾಯಿ, ಅನಾನಸ್, ಅಸ್ಸಾಂ ನಿಂಬೆ, ಕಿತ್ತಳೆ ಇತ್ಯಾದಿಗಳನ್ನು ಒಳಗೊಂಡಿದೆ. ಕೃಷಿ ವಿಜ್ಞಾನ ಕೇಂದ್ರ, ಪೂರ್ವ ಖಾಸಿ ಹಿಲ್ಸ್ ಜಿಲ್ಲೆ ವರ್ಷವಿಡೀ ಬಗೆಬಗೆಯ ತರಕಾರಿಗಳನ್ನು ಬೆಳೆಯುವ ಮೂಲಕ ಭೂಮಿಯ ಬಳಕೆಯನ್ನು ಪರಿಣಾಮಕಾರಿಯಾಗಿಸುತ್ತದೆ. ಜೊತೆಗೆ ಕೃಷಿ ಆದಾಯವನ್ನು ಹೆಚ್ಚಿಸಿ ಮಣ್ಣಿನ ಆರೋಗ್ಯವನ್ನು ಉಳಿಸುವುದಕ್ಕೆ ಒತ್ತುನೀಡುತ್ತದೆ. ಹಲವಾರು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕೆ ಅವರಿಗೆ ತರಕಾರಿಗಳು ಬೆಳೆವೈವಿಧ್ಯತೆಯಲ್ಲಿ, ಆಹಾರ ವೈವಿಧ್ಯತೆಯಲ್ಲಿ ಹಾಗೂ ಪೌಷ್ಟಿಕಾಂಶ ಭದ್ರತೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎನ್ನುವುದು ಅರಿವಾಯಿತು. ಅವರ ಗ್ರಾಮವಾದ ಮೌಸಿಯಾತ್‌ಖ್ನಮ್‌ನಲ್ಲಿ, ಪಾಲಿಹೌಸ್‌ನಲ್ಲಿ ವರ್ಷವಿಡೀ ತರಕಾರಿ ಉತ್ಪಾದನೆ ಮಾಡಬಹುದಿತ್ತು. ಮೇ ನಿಂದ ಅಕ್ಟೋಬರ್ ಅವಧಿಯಲ್ಲಿ ಹೆಚ್ಚಿನ ಮಳೆಯಾಗುವುದರಿಂದ ತೆರೆದ ಬಯಲಿನಲ್ಲಿ ಎರಡನೇ ಬೆಳೆ ಬೆಳೆಯುವುದು ತುಂಬಾ ಕಷ್ಟ. ಸ್ವತಃ ಪಾಲಿಹೌಸ್ ನಿರ್ಮಿಸಲು ಸಾಧ್ಯವಾಗದ ಕಾರಣ ಅವರು ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿದರು. ಅವರು SASMIRA ಸಹಯೋಗದೊಂದಿಗೆ ಕೃಷಿ ಜವಳಿ ಸಚಿವಾಲಯದ ಮೂಲಕ ಸಬ್ಸಿಡಿ ದರದಲ್ಲಿ ಒಂದು ಪಾಲಿಹೌಸ್ ನಿರ್ಮಿಸಲು ಸಹಾಯ ಮಾಡಿದರು. ಈಗ ಅವರು ವರ್ಷಪೂರ್ತಿ ತರಕಾರಿಗಳನ್ನು ಬೆಳೆಯುತ್ತಿದ್ದು ಆ ಮೂಲಕ ಆದಾಯ ಗಳಿಸುತ್ತಿದ್ದಾರೆ.

       ii.  ಪಶುಸಂಗೋಪನೆ ಮತ್ತು ಜಾನುವಾರು ಘಟಕ

ಅ) ಕೋಳಿ ಸಾಕಣೆ ಘಟಕ

2000ನೇ ಇಸವಿಯಲ್ಲಿ ತಮ್ಮ ಜಮೀನಿನಲ್ಲಿ ಐವತ್ತು ಕೋಳಿಗಳೊಂದಿಗೆ ಸಾಕಾಣಿಕೆ ಆರಂಭಿಸಿದರು. ಆದರೆ, ನಿರೀಕ್ಷಿತ ಆದಾಯ ಸಿಗುತ್ತಿರಲಿಲ್ಲ. ನಂತರ ಇನ್ನಷ್ಟು ಕೋಳಿಗಳನ್ನು ಕೊಂಡರು. ಅವರು BV 360 ತಳಿಗಳ ಸಾಕಣೆ ಆರಂಭಿಸಿದಾಗ ವೈಜ್ಞಾನಿಕ ಕೋಳಿ ಸಾಕಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಿದರು. ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅವರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರು. ಆದರೂ ನಷ್ಟವನ್ನು ಎದುರಿಸಬೇಕಾಯಿತು. ಸೂಕ್ಷ್ಮವಾಗಿ ಗಮನಿಸಿದಾಗ ಕೋಳಿಗಳು ಕತ್ತಲಿರುವಂತಹ ಮೂಲೆಗಳಲ್ಲಿ ಮೊಟ್ಟೆಗಳನ್ನು ಇಡುತ್ತಿರುವುದು ಕಂಡಿತು. ಮೊಟ್ಟೆಯಿಡುವ ಸಮಯದಲ್ಲಿ ಮೊಟ್ಟೆಗಳ ಒಡೆಯುವಿಕೆಯನ್ನು (0% ಮೊಟ್ಟೆಗಳ ಒಡೆಯುವಿಕೆ) ತಡೆಗಟ್ಟುವ ಸಲುವಾಗಿ ಕ್ಯಾಬಿನ್‌ಗಳನ್ನು ನಿರ್ದಿಷ್ಟ ವಿಸ್ತೀರ್ಣಕ್ಕನುಗುಣವಾಗಿ ನಿರ್ಮಿಸಲಾಗಿರುತ್ತದೆ. ಮೊಟ್ಟೆಗಳನ್ನು ಕ್ಯಾಬಿನ್‌ ಪ್ರವೇಶಿಸದೆ ತೆಗೆದುಕೊಳ್ಳಲು ಅನುಕೂಲವಾಗುವಂತೆ ಕ್ಯಾಬಿನ್‌ಗೆ ಟಾಪ್‌ ಕವರ್‌ಗಳನ್ನು ಅಳವಡಿಸಲಾಗಿರುತ್ತದೆ.  ಈ ವಿಧಾನದಿಂದ ಅವರು ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಕೋಳಿಗಳ ಸಾವನ್ನು ಕೂಡ ನಿಯಂತ್ರಿಸಬಹುದು. ಈ ವಿನೂತನ ತಂತ್ರಜ್ಞಾನ ಅಳವಡಿಕೆಯಿಂದ ರೈತರಿಗೆ ಸರಿಸುಮಾರು 90% ಮೊಟ್ಟೆ ಹಾಳಾಗುವುದು ತಪ್ಪಿತು ಮತ್ತು 80-90% ಉತ್ಪಾದನೆ ಹೆಚ್ಚಿತು. ಈ ವಿಧಾನದಲ್ಲಿ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಉತ್ಪಾದನೆ ಪಡೆಯಬಹುದು. ಸಾವಿನ ಸಂಖ್ಯೆ ಕಡಿಮೆಯಾಗುವುದರಿಂದ ಆರ್ಥಿಕವಾಗಿಯೂ ಲಾಭದಾಯಕವಾಗುತ್ತದೆ.

ಆ) ಹಂದಿ ಸಾಕಣೆ ಘಟಕ

ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಹಂದಿಸಾಕಣೆ ಅತ್ಯಂತ ಸಾಮಾನ್ಯವಾಗಿದ್ದು ಅದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇಲ್ಲಿನ 80%  ರೈತಾಪಿ ಕುಟುಂಬಗಳು (ಹೆಚ್ಚು ಕಡಿಮೆ ಪ್ರತಿಕುಟುಂಬವೂ ಒಂದು ಇಲ್ಲವೇ ಎರಡು ಹಂದಿ) ಕೊಬ್ಬನ್ನು ಸಂಗ್ರಹಿಸಲೆಂದೇ ಹಂದಿಗಳನ್ನು ಸಾಕುತ್ತಾರೆ. ದೇಸಿ ತಳಿಗಳನ್ನು ಸಾಂಪ್ರದಾಯಿಕವಾಗಿ ಸಾಕಣೆ ಮಾಡುತ್ತಾರೆ. ಹಂದಿ ಉತ್ಪಾದಕರಿಗೆ ಕೊಬ್ಬನ್ನು ಪಡೆಯಲು ಅವರದೇ ಆದ ಸಾಂಪ್ರದಾಯಿಕ ಜ್ಞಾನ ಹಾಗೂ ಕೌಶಲಗಳಿವೆ. ಕೆಲವರಿಗೆ ಮಾತ್ರ ಸಂತಾನ್ಪೋತ್ತಿ ಮಾಡುವ ಕೌಶಲವನ್ನು ಹೊಂದಿದ್ದಾರೆ. ಇದನ್ನು ಗಮನಿಸಿ ಅವರು ಹಂದಿ ಸಾಕಣೆ ಘಟಕವನ್ನು ಆರಂಭಿಸಿದರು. ಅವರು ಒಂಬತ್ತು ಹೆಣ್ಣು ಹಂದಿಗಳನ್ನು ಮತ್ತು ಒಂದು ಗಂಡು ಹಂದಿಯನ್ನು ಸಾಕುತ್ತಿದ್ದು ಅವು ವರ್ಷಕ್ಕೊಮ್ಮೆ ಮರಿ ಹಾಕುತ್ತವೆ. ಹಂದಿ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಸುಧಾರಣೆಗೆ/ವಿಸ್ತರಣೆಗೆ ಇದರಲ್ಲಿ ಒಳ್ಳೆಯ ಅವಕಾಶಗಳಿವೆ.

ಇ) ಮೇಕೆ ಸಾಕಣೆ ಘಟಕ

ಈ ಘಟಕದಲ್ಲಿ ಹದಿನೈದು ಮೇಕೆಗಳಿವೆ. ಇವುಗಳನ್ನು ಬೇಲಿ ಹಾಕಿದ ಪ್ರದೇಶದಲ್ಲಿ ಮೇಯಿಸಲಾಗುತ್ತದೆ. ಇವುಗಳಿಗೆ ಮೇವಿಗೆ ಶೂನ್ಯ ವೆಚ್ಚ ತಗಲುತ್ತದೆ. ಬೇಲಿಗೆ ಹಾಗೂ ಶೆಡ್ಡಿಗೆ ಸುಮಾರು ಐದು ಸಾವಿರ ರೂ.ಗಳು ಖರ್ಚು ತಗಲಿದೆ. ಮೇಕೆಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಈ) ಮೀನು ಸಾಕಣೆ ಘಟಕ

2018ರಲ್ಲಿ 600 ಕೆಜಿ/0.3  ಹೆ ಸಾಮರ್ಥ್ಯದ ಮೂರು ಮೀನಿನ ಹೊಂಡಗಳನ್ನು ನಿರ್ಮಿಸಿದರು. ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಮೀನಿನ ಬೆಲೆ ಇನ್ನೂರು ರೂಪಾಯಿ. ಎಲ್ಲ ಘಟಕಗಳ ಉಪ ಉತ್ಪನ್ನಗಳು ತೋಟಕ್ಕೆ ಗೊಬ್ಬರವಾಗಿ ಹಾಗೂ ಮೀನುಗಳಿಗೆ ಆಹಾರವಾಗಿ ಬಳಕೆಯಾಗುತ್ತವೆ.

iii.  ಎರೆಹುಳುಗೊಬ್ಬರ ಘಟಕ

ಅವರು 6x4x2 ಅಡಿಯ ಎರಡು ಎರೆಹುಳು ತೊಟ್ಟಿಗಳನ್ನು ಹೊಂದಿದ್ದು ಅವು ವಾರ್ಷಿಕ ಸರಿಸುಮಾರು 3000 ಕೆಜಿ ಎರೆಹುಳುಗೊಬ್ಬರ ತಯಾರಿಕಾ ಸಾಮರ್ಥ್ಯವನ್ನು ಹೊಂದಿದೆ. ಇದನ್ನೇ ಅವರ ತೋಟಕ್ಕೆ ಬಳಸಲಾಗುತ್ತದೆ. ಅವರ ತೋಟದಲ್ಲಿ ಸಿಗುವ ವಸ್ತುಗಳನ್ನೇ ವರ್ಷಪೂರ್ತಿ ಗೊಬ್ಬರ ತಯಾರಿಕೆಗೆ ಬಳಸಲಾಗುತ್ತಿದೆ.

ಕೋಷ್ಟಕ ೧ : ಸಮಗ್ರ ಕೃಷಿ ಅಡಿಯಲ್ಲಿ ಪ್ರತಿಯೊಂದು ಘಟಕಗಳಿಗೆ ತಗುಲಿದ ವೆಚ್ಚ ಹಾಗೂ ಗಳಿಸಿದ ನಿವ್ವಳ ಆದಾಯ

ಘಟಕಗಳು ಪ್ರದೇಶ/ಸಂ. ಒಟ್ಟು ಆದಾಯ ನಿವ್ವಳ ಆದಾಯ ಬಿ:ಸಿ
1.              ತೋಟಗಾರಿಕೆ ಘಟಕ
ಸಂರಕ್ಷಿತ ಸಾಗುವಳಿ (2018 ರಿಂದ) 1 (500 ಎಂ2) 1,10,000.00 45583.00 0.71

(1ನೇ ವರ್ಷ)

ಮುಕ್ತ ಕೃಷಿ ಶುಂಠಿ 2,40,000 182508.00 3.20
2.              ಪಶುಸಂಗೋಪನೆ ಮತ್ತು ಜಾನುವಾರು ಸಾಕಣೆ
 

i. ಕೋಳಿ ಸಾಕಣೆ

 

ತಳಿಗಳು 8,76,000.00 7,09,140.00 4.25
ದೇಸಿ ತಳಿ 18,000.00 8,556.00 2
 

ii. ಮೇಕೆ ಸಾಕಣೆ

 

15 60000.00 38000.00 1.73
 

iii.ಹ ಂದಿ ಸಾಕಣೆ

 

1(9sows+1boar) 6,00,000.00 4,31,419.00 2.4
 

iv. ಮೀನು ಸಾಕಣೆ (ಅಂದಾಜು)

 

3 (1000 ಎಂ2 ಪ್ರತಿ) 15000.00 35000.00 2.3

ಪರಿಣಾಮ

 ರೈತರು ಅಭಿವೃದ್ಧಿಪಡಿಸಿದ ಹೊಸ ತಂತ್ರಜ್ಞಾನಗಳನ್ನು ಕಳೆದ 3 ವರ್ಷಗಳಿಂದ ಅವರು ಅಭ್ಯಾಸ ಮಾಡುತ್ತಿದ್ದು, ಆರ್ಥಿಕವಾಗಿ ಲಾಭದಾಯಕವೆಂದು ಸಾಬೀತುಪಡಿಸಿದ್ದಾರೆ. ಶ್ರೀ ವಾಲಂ ಕೆ.ಲಿಂಗ್ರ ಅವರ ಫಾರ್ಮ್ ಈಗ ಮಾದರಿ ಫಾರ್ಮ್ ಆಗಿದೆ. ಅವರ ಹಳ್ಳಿಯ ಮತ್ತು ಜಿಲ್ಲೆಯ ಕೋಳಿ ಶೆಡ್‌ಗಳನ್ನು ಹೊಂದಿರುವ ರೈತರು ಅವರ ಯಶಸ್ಸಿನಿಂದ ಪ್ರೇರಿತರಾಗಿದ್ದಾರೆ. ಪ್ರಶಸ್ತಿ ವಿಜೇತ ವಿನೂತನ ಕಲ್ಪನೆ ಕಡಿಮೆ ವೆಚ್ಚದ ಪೌಲ್ಟ್ರಿ ಲೇಯರ್ ಶೆಡ್ ಅನ್ನು ಅಳವಡಿಸಿಕೊಂಡಿದ್ದಾರೆ. ಜಿಲ್ಲೆ ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಪೌಲ್ಟ್ರಿ ಲೇಯರ್ ಫಾರಂ ಸ್ಥಾಪಿಸುವ ಹಂಬಲ ಹೊಂದಿರುವ ಇತರ ರೈತರಿಗೆ ಇವರು ಮಾದರಿಯಾಗಿದ್ದಾರೆ. ಅವರು ತಮ್ಮ ಜಮೀನಿನಲ್ಲಿ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒಗ್ಗೂಡಿಸಿ ಬಳಸುತ್ತಿದ್ದಾರೆ. ತಮ್ಮ ಫಾರ್ಮ್‌ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಪ್ರಗತಿಪರ ರೈತರಾಗಿ ಅವರು ಯಾವಾಗಲೂ ಕೌಶಲ ಅಭಿವೃದ್ಧಿಗೆ ಮತ್ತು ತರಬೇತಿಗಳು, ವಿವಿಧ ವಿಭಾಗಗಳ ಪರಿಣಿತರನ್ನು ಭೇಟಿ ಮಾಡುವಂತಹ ವಿವಿಧ ಮೂಲಗಳ ಮೂಲಕ ಕೃಷಿಯ ಪ್ರತಿಯೊಂದು ಅಂಶವನ್ನು ತಿಳಿದುಕೊಳ್ಳಲು ಸದಾ ಉತ್ಸುಕರಾಗಿದ್ದಾರೆ.  ಅವರು ಈಗ ಸುಧಾರಿತ ಕೃಷಿ ಪದ್ಧತಿಗಳಿಗೆ ಸಂಬಂಧಿಸಿದಂತೆ ಇತರ ರೈತರನ್ನು ಪ್ರಭಾವಿಸುವಂತಹ ಪ್ರೇರಕರಾಗಿದ್ದಾರೆ. ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಹೊಸತನ್ನು ಅಳವಡಿಸಿಕೊಂಡ ರೈತರಲ್ಲೊಬ್ಬರು ಎನ್ನುವ ಪ್ರಶಂಸೆಗೆ ಪಾತ್ರವಾಗಿರುವ ಇವರು IFS ನಲ್ಲಿ ಕೋಳಿ ಮತ್ತು ಹಂದಿ ಸಾಕಾಣಿಕೆಗೆ ಸಂಬಂಧಿಸಿದ ಪ್ರಮುಖ ತರಬೇತುದಾರರಲ್ಲಿ ಒಬ್ಬರು. ತಮ್ಮ ಬ್ಲಾಕ್‌ನಲ್ಲಿ ಯಶಸ್ವಿ ಸಮಗ್ರ ಕೃಷಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಮಾದರಿಯಾಗಿದ್ದಾರೆ.

Mawsiatkhnam KVK

East Khasi Hills, Upper Shillong-793009,Meghalaya

e-mail: kvkekhup@gmail.com

ಟಿಪ್ಪಣಿ : ಈ ಲೇಖನವು ಮೂಲತಃ ಇಲ್ಲಿ ಪ್ರಕಟವಾಗಿದೆ – Bidyut C. Deka, A.K.Singha, Divya Parisa, Azriel Mervin Tariang, Emika Kordor Kyndiah Mesaya R. Marak (Eds.,), Integrated Farming Systems for Doubling Farmers’ Income in NEH Region of India, ICAR- Agricultural Technology Application Research Institute, Zone – VII, Umiam, Meghalaya –793103, March 2020.

ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೩; ಸಂಚಿಕೆ : ‌೪ ; ಡಿಸೆಂಬರ್ ೨೦‌೨೧

Recently Published Articles

Women-led farm initiatives

Women-led farm initiatives

By using organic farming methods, developing connections with markets, generating income, and enhancing their own...

Topics

Call for articles

Share your valuable experience too

Share This